ಹೋಗುವ ಬಾರ ಮಲೆನಾಡ
ಶಿರಾಡಿ ಘಟ್ಟ |
ನಾಲ್ಕು ಚಕ್ರದ ವಾಹನ
ಸರಸದಿ ತಲುಪಿದ ಹಾಸನ
ಹೃದಯದಿ ನಿಲ್ಲದ ಕಂಪನ
ಮಂಜರಾಬಾದ್ ಕೋಟೆ |
ಮಂಜರಾಬಾದ್ ಕೋಟೆ |
ತಿರುವನು ದಾಟಿ ಕಂಡಿಹ ನೋಟ
ಮಂಜಿನ ಕೋಟೆಯ ಹತ್ತಲು ಓಟ
ಮೋಡದಿ ಮೂಡಿದ ವರುಣನ ಹನಿಗಳು
ನೆಂದವು ಹಸುರಿನ ವನ ಗಿಡಮರಗಳು
ಕುಕ್ಕೆ ಸುಬ್ರಹ್ಮಣ್ಯ |
ದರುಶನ ಭೋಜನ ಪಡೆದವ ಧನ್ಯ
ಥಟ್ಟನೆ ಹೊರಟೆವು ಧರ್ಮಸ್ಥಳವ
ಕಂಡೆವು ತಂದೆಯ ದೇವಸ್ಥಾನವ
ಚಾರ್ಮಾಡಿ ಘಟ್ಟ |
ಚಾರ್ಮಾಡಿ ಘಟ್ಟ |
ತಿರುವಿನ ಮೇಲೆ ತಿರುವಿನ ಸಾಲ
ಚಾರ್ಮಾಡಿ ಸರಣಿಯು ಬೃಹದಾಕಾರ
ಬಂಡೆಯ ಮೇಲೆ ನೀರಿನ ನಾದ
ಹರಿಯುವ ಸ್ಫಟಿಕ ಸಿಹಿ ಸುಸ್ವಾದ
ಕುದ್ರೆಮುಖ |
ಕುದ್ರೆಮುಖ ಅರಣ್ಯ ಚೆಕ್ ಪೋಸ್ಟ್ |
ಮುಗಿಲಲಿ ಸೂರ್ಯನು ಮುಳುಗುತ್ತಿರಲು
ಎಲ್ಲೆಡೆ ಮಂಜು ಮುಸುಕುತ್ತಿರಲು
ಅಶ್ವದ ಮೊಗವನು ಕಾಣುವ ಆಸೆ
ಕಗ್ಗತ್ತಲೆಯಲಿ ಸೇರಿದ ಸಮಸೆ
ಕುದ್ರೆಮುಖ ಅರಣ್ಯ |
ಶೃಂಗೇರಿ |
ಭಯವನು ಮರೆಯಲು ಸಿನೆಮಾ ಹಾಡು
ಗಾಡಿಯು ಕೆಡಲು ಭೂತವು ಏರಿ
ಕ್ಷೇಮದಿ ತಲುಪಿದ ಸಿರಿ ಶೃಂಗೇರಿ
ತುಂಗಾ ನದಿ |
ಕುಂದಾದ್ರಿ ಬೆಟ್ಟ |
ಸೂರ್ಯನು ಬೆಳಗಲು ತುಂಗವ ಸ್ಪರ್ಶಿಸಿ
ವಿದ್ಯಾರ್ಜನೆಗೆ ತಾಯಿಯ ನಮಿಸಿ
ಕುಂದಾದ್ರಿಯ ತುದಿ ಏರುವ ಸಾಹಸ
ಕೊನೆ ಕಾಣದ ಆಗುಂಬೆಯ ಆಗಸ
ಆಗುಂಬೆ |
ಲಿಂಗನಮಕ್ಕಿ ಜಲಾಶಯ |
ವೇಗದಿ ತಲುಪಿದ ನಗರ ತುಮರಿ
ಹರಿಸಿದ ನಮ್ಮನು ಚೌಡೇಶುವರಿ
ಏರಿತು ಗಾಡಿಯು ದೋಣಿಯ ಸಿಕ್ಕಿ
ಮಳೆಯಲಿ ದಾಟಿದ ಲಿಂಗನಮಕ್ಕಿ
ಜೋಗ್ ಜಲಪಾತ |
ಜೋಗ್ ಜಲಪಾತ |
ಮೇಘದ ಮರೆಯಲಿ ಜೋಗದ ಗುಂಡಿ
ಸುರಿಯುವ ಮಳೆ ಜಲಧಾರೆಯ ಥಂಡಿ
ಪತಾಳದ ಕಿಂಚಿತ್ ಅನುಭವ ಪಡೆದೆವು
ಶಿವಮೊಗ್ಗೆಯಲಿ ರಾತ್ರಿಯ ಕಳೆದೆವು
ಕಲ್ಲತ್ತಿಗಿರಿ ಜಲಪಾತ |
ಹೆಬ್ಬೆ ಅರಣ್ಯ |
ದೇಗುಲಕೆ ಜಲಪಾತದ ಸೂರು
ಗಾಡಿಯು ಹೆಬ್ಬೆ ತಲುಪುತಲಿರಲು
ಹೆಬ್ಬೆ ಜೀಪು ಪ್ರಯಾಣ |
ಹೆಬ್ಬೆ ಅರಣ್ಯ |
ಜೀಪಿನ ಪಯಣ ಕಾಣದ ಯಾನ
ನದಿಯನು ದಾಟಲು ದಟ್ಟನೆ ಕಾನನ
ಬಿಡದೆ ಹತ್ತುವ ತಿಗಣೆಯ ಸಾಗರ
ಹೆಬ್ಬೆ ಜಲಪಾತ |
ಹೆಬ್ಬೆ |
ಮುಗಿಲೆತ್ತರದಿಂಧುಮುಕುವ ಹೆಬ್ಬೆಯ
ರಭಸಕೆ ಕೇಳದು ಮಾತಿನ ದನಿಯ
ಬೀಸುವ ಗಾಳಿಯ ತಂಪಿಗೆ ನಡುಕ
ಮರೆಯದ ನೋಟ ವಿಸ್ಮಯ ಜನಕ
ಮುಳ್ಳಯ್ಯನಗಿರಿ ರಸ್ತೆ |
ಮುಳ್ಳಯ್ಯನಗಿರಿ ಪರ್ವತ |
ಭಯದಲಿ ಏರಿದ ಮುಳ್ಳಯ್ಯನಗಿರಿ
ಮೇಘದ ಮರೆ ಕಿರಿಯಂಚಿನ ದಾರಿ
ಪರ್ವತ ಶೃಂಗದಿ ಬೀಸುವ ಗಾಳಿಯು
ವೇಗಕೆ ಎಡಬಲ ತೂಗಿದ ಗಾಡಿಯು
ಮುತ್ತೋಡಿ |
ಮುತ್ತೋಡಿ ಅರಣ್ಯ |
ಸಾಹಸಗಳ ಆಯಾಸವ ಮರೆತು
ಮುತ್ತೋಡಿಯ ಮೀಸಲು ಕಾಡಿಗೆ ಹೊರಟು
ವ್ಯಾಘ್ರನ ದೂರದಿ ಕಾಣುವ ಬಯಕೆ
ಮಾರ್ಗದ ನಕ್ಷೆ |
ಮುತ್ತೋಡಿ ಅರಣ್ಯ |
ಪಯಣವು ಮುಗಿಯಿತು ಮುಖಗಳು ಮುದುಡಿತು
ಹಲವು ಸ್ಥಳ ನಾಲ್-ದಿನಗಳು ಸಾಗಿತು
ಬಹುಜಗಗಳ ಸಿರಿ ಕರುನಾಡ
ಹೋಗುವ ಬಾರ ಮಲೆನಾಡ
- ಅಭಿರಾಮ್ ಭಾರದ್ವಾಜ್
No comments:
Post a Comment